Monday, 15 June 2015

ಮರಳಿ ಮರಳಿ ಕಾಡುತಿದೆ
ನೀ ಬಿಟ್ಟು ಹೋದ ನೆನಪು
ಕಣ್ಣಲಿ ಅಲುಗದೆ ಕುಳಿತಿದೆ
ನಿನದೆ ವಯ್ಯಾರ ಒನಪು

ತೋರುತಿದೆ ನನ್ನ ಹೃದಯ
ನನ್ನ ಮೇಲೆಯೆ ಮುನಿಸು
ಮರೆತಿದೆ ಮನವು ಖುಷಿಯ
ಕರಗಿದೆ ಒಲವ ಕನಸು

ಬಳಿ ಬಂದು ಒಮ್ಮೆ ತೋರೇ
ಈ ಮನಕೆ ಒಲವ ಸವಿಯ
ಮತ್ತೊಮ್ಮೆ ಪರಿಚಯಿಸು ಬಾರೇ
ಈ ಹೃದಯಕೆ ಖುಷಿಯ ರವಿಯ.
-ಪ್ರಕಾಶ್

No comments:

Post a Comment