ಎನ್ ಚೆಂದ ಅದಿಯೇ ಗರತಿ....!
ತೊಟ್ಕೊಂಡಿ ಮುತ್ತಿನ ಮೂಗುತಿ
ಉಟ್ಕೊಂಡಿ ಇಳಕಲ್ ಸೀರಿ
ಆಗಿದಿ ನನ್ನೆದೆಯ ಒಡತಿ
ಕಾಡ್ತಿದಿ, ಕನಸನ್ಯಾಗ ಬರತಿ
ಹಸಿರು ಬಳೆಗಳ ಸಪ್ಪಳ ಮಾಡತಿ
ಬೆಳ್ಳಿ ಗೆಜ್ಜೆಗಳ ನಾದ ಹೊರಡಿಸುತಿ
ಓರೆಗಣ್ಣೊಳಗ ಕಾಡೊಹಾಂಗ ನೋಡತಿ
ನೋಡೊ ನೋಟದಾಗ ನನ್ನ ಸುಡತಿ
ನಗುವಿನ ಒಡವಿ ಹಾಕ್ಕೊಂಡು
ನಾಚಿಕೆಯ ಅರಿವೆ ಹೊದ್ಕೊಂಡು
ಮಲ್ಲಿಗೆಯ ಮಾಲೆ ಮುಡ್ಕೊಂಡು
ಹೊಂಟಿದಿ ನನ್ನ ಮನಸು ಹೊಡ್ಕೊಂಡು
_ಪ್ರಕಾಶ್
ತೊಟ್ಕೊಂಡಿ ಮುತ್ತಿನ ಮೂಗುತಿ
ಉಟ್ಕೊಂಡಿ ಇಳಕಲ್ ಸೀರಿ
ಆಗಿದಿ ನನ್ನೆದೆಯ ಒಡತಿ
ಕಾಡ್ತಿದಿ, ಕನಸನ್ಯಾಗ ಬರತಿ
ಹಸಿರು ಬಳೆಗಳ ಸಪ್ಪಳ ಮಾಡತಿ
ಬೆಳ್ಳಿ ಗೆಜ್ಜೆಗಳ ನಾದ ಹೊರಡಿಸುತಿ
ಓರೆಗಣ್ಣೊಳಗ ಕಾಡೊಹಾಂಗ ನೋಡತಿ
ನೋಡೊ ನೋಟದಾಗ ನನ್ನ ಸುಡತಿ
ನಗುವಿನ ಒಡವಿ ಹಾಕ್ಕೊಂಡು
ನಾಚಿಕೆಯ ಅರಿವೆ ಹೊದ್ಕೊಂಡು
ಮಲ್ಲಿಗೆಯ ಮಾಲೆ ಮುಡ್ಕೊಂಡು
ಹೊಂಟಿದಿ ನನ್ನ ಮನಸು ಹೊಡ್ಕೊಂಡು
_ಪ್ರಕಾಶ್